Saturday, April 12, 2014

ಇಲ್ಲದಿರುವಿಕೆ (ಇಲ್ಲದೆ ಇರುವಿಕೆ)



ಬೆವರಾಗಿ ಬಂದಿರುವ ಭಾವನೆಯ ಬೆನ್ನಲ್ಲಿ
ನಾಚಿಕೆಯು ನೀನೆ..
ಜೋರಾಗಿ ಹೊರಟಿರುವ ಆಸೆಯ ತೇರಿನಲಿ
ಹೂವಾಗಲೇನೇ..
ಮೈಯ್ಯಾರೆ ಮುಡಿದು, ನೀ ನಕ್ಕು ದೂಡಲು... ಮರಳಿ ಮರೆಯಾಗಲೇ

ನೀ ತೋಳಲಿ ಸರಿದಾಡಿ ಬಿಗಿಯಾಗಿ ತಬ್ಬಿದರೆ
ನಿನ ಮನೆಯು ನಾನಾಗಲೇ..
ಕನಸಾಗಿ ಬಂದಿರುವ ರಾತ್ರೀಲಿ ಮೋಸದಿ
ನಿನಗಾಗಿ ನನಸಾಗಲೇ..
ಉಸಿರಲ್ಲಿ ಬಿಸಿಯಾಗಿ ನಿನ ಓಲೆ ತಾಕಲು... ಬರೀ ಸದ್ದಾಗಲೇ

ಲಜ್ಜೆಯಲಿ ಗಂಟಾಗಿ ಹೋದ ಹುಬ್ಬುಗಳ
ಸಮವಾಗಿ ಸರಿಮಾಡಲೇ..
ಜಾರಿರುವ ದಿಂಬಿಗೆ, ಮುದುಡಿರುವ ಸೀರೆಗೆ
ನಾ ಜೋರು ನೆಪವಾಗಲೇ..
ಬೆರಳಲ್ಲಿ ಎಣಿಕೆಗೆ ಸಿಗದಿರೋ ಬಾರಿಗೆ ಮತ್ತೆ ಮತ್ತೆ ಬಂದು ಹೋಗಲೇ


ರಾವಣನ ಕಥೆಯಲ್ಲಿ ರಾಮನೇ ರಾಕ್ಷಸ

 ರಾಕ್ಷಸ ರಾವಣನ ವಿರುದ್ಧ ಧರ್ಮಯುಧ್ಧಕ್ಕೆ ಹೋಗುವ ಮುನ್ನ ರಾಮನು ಯಜ್ಞ ಮಾಡಬೇಕು, ಆ ಯಜ್ಞವನ್ನು ಒಬ್ಬ ಶ್ರೇಷ್ಠ ಬ್ರಾಹ್ಮಣನು ನೆರವೇರಿಸಿ ಕೊಡಬೇಕು ಅಂತ ಗುರುಗಳು ಪ...