ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ವೈಶಿಷ್ಟ್ಯವಾಗಿರುವುದು

ಒಂದು ಮುತ್ತಿನ ಕಥೆ

ಡಿಸೆಂಬರ್ ಛಳಿಯಲ್ಲಿ ಮಾವ ಉಡುಗೊರೆಯಾಗಿ ಕೊಟ್ಟ ಅನಾಮತ್ ಚಾದರದಲ್ಲಿ ಬೆಚ್ಚನೆಯ ಆಸೆ ಹುಟ್ಟಿ ಹೆಂಡತಿಯ ಕೈ ಸವರಿದಾಗ ಅವಳು ಯಾವುದೋ ಪುಸ್ತಕವನ್ನು ಓದುತ್ತ ಮುಗುಳುನಗುತ್ತಿದ್ದಳು. ಅವಳಿಗೆ ನಿದ್ದೆ ಬರದೇ ಕಾಡಿದಾಗ ಅವಳು ನನ್ನನ್ನು ಕಾಡದೇ ಪುಸ್ತಕದ ಮೊರೆ ಹೋಗುತ್ತಾಳೆ, ಅದಕ್ಕೆ ಅವಳ ಮೇಲೆ ಆಗೆಲ್ಲ ಪ್ರೀತಿ ಜಾಸ್ತಿಯಾಗುತ್ತದೆ. ಏನೋ ಹೊಳೆದಂತಾಗಿ ಅವಳು 'ಒಂದು ಪ್ರಶ್ನೆ! ' ಅಂತಂದಳು. ಕೈ ವಾಪಸ್ಸು ಎಳೆದುಕೊಂಡು ಕೇಳು ಎಂದು ಉಬ್ಬು ಹಾರಿಸಿದೆ. ನನ್ನ ನೇರವಾಗಿ ಬಂದು ನಾಟಿದ ಪ್ರಶ್ನೆ, 'ನಿನ್ನ ಮೊದಲ ಮುತ್ತಿನ ಅನುಭವ ಹೇಳು. ಯಾರ ಜೊತೆ ಅಂತ ಹೇಳಬೇಕಿಲ್ಲ'. ಮದುವೆಯಾಗಿ ಒಂದು ವರ್ಷ ಆದರೂ ನನ್ನ ಭೂತದ ಬಗ್ಗೆ ಕ್ಯಾ ರೇ ಅನ್ನದ ನನ್ನ 'ಆದರ್ಶ ಮಡದಿ' ಇಂದು ಒಮ್ಮೆಲೇ ನನ್ನ ಬುಡಕ್ಕೇ ಕೈ ಹಾಕಿದ್ದಕ್ಕೆ ಕಾರಣ ಅವಳು ಓದುತ್ತಿದ್ದ ಆ ಪುಸ್ತಕವೇ ಇರಬಹುದು! ಅದರ ಹೊದಿಕೆಯತ್ತ ಕಣ್ಣು ಹಾಯಿಸಿದೆ, ಅವಳ ಬೆರಳಡಿ ಅದು ಮಡಚಿಕೊಂಡಿತ್ತು. ಕ್ಷಣದ ಹಿಂದೆ ನಿದ್ದೆಯ ಮಂಪರಿನಲ್ಲಿ ತೇಲಿ ಹೋಗಿದ್ದ ಕಣ್ಣುಗಳು ಕ್ಷಣದಲ್ಲಿ ಎಚ್ಚೆತ್ತುಕೊಂಡು ಬ್ರಹ್ಮಾಂಡದಷ್ಟು ದೊಡ್ಡವಾಗಿದ್ದನ್ನು ಅವಳು ಗಮನಿಸದೇ ಇರಲಾರಳು. ಮೋಡ ಕವಿದ ತಂಪು ವಾತಾವರಣದಲ್ಲಿ ಮೋಡ ಸೀಳಿ ಬಂದು ಹೋದ ಮರಿಸಿಡಿಲನಂತಿದ್ದ ಆ ಪ್ರಶ್ನೆಗೆ ನಾನು ಗದರಿದ್ದೆ. ಗದರುವುದು ಹಾಗು ಹೆದರುವುದು ಬೇರೆ ಬೇರೆ, ಅವಳಿಗೆ ಅದು ತಿಳಿದಿದ್ದರೆ ಸಾಕು ಎಂದೆನಿಸಿತು. ಪ್ರಶ್ನೆ ಕೇಳಿ…

ಇತ್ತೀಚಿನ ಪೋಸ್ಟ್‌ಗಳು

ಇಮೇಜ್

KGF ಹೆಂಗಿದೆ??

ಇಮೇಜ್

ರಾವಣನ ಕಥೆಯಲ್ಲಿ ರಾಮನೇ ರಾಕ್ಷಸ

ಇಮೇಜ್

ಊರ ಉಸಾಬರಿ, ತಪ್ಪು ಯಾವುದು, ಯಾವುದು ಸರಿ.

ಇಮೇಜ್

ಒಂಭತ್ತು ದಿನಗಳ ದುರ್ಗಿ

ಇಮೇಜ್

ಮನುಷ್ಯರು ಓದಲೆಂದು ಹುಟ್ಟಿದವರಲ್ಲ... ನೀವು ಮನುಷ್ಯರಾಗಿದ್ದಲ್ಲಿ ಇದನ್ನು ಓದಬೇಡಿ !

ಇಮೇಜ್

ಟಪಾಲು ಗಾಡಿ

ಇಮೇಜ್

ನಾನೇ ಇವತ್ತಿನ ಭಾರತ!

ಇಮೇಜ್

ಬೂಬು

ಪೂರ್ವ ಜನ್ಮದ ಪಾಪಿ

ಇಮೇಜ್

ಕಣ್ಣು ಬಿಟ್ಟು ನೋಡಿ, ಬೇಜಾನ್ ಇದೆ ಮ್ಯಾಟ್ರು

ಇಮೇಜ್

ಸರಿ ದಾರಿ ಗೊತ್ತಿದ್ರೆ ಶಬ್ದ ಮಾಡಿ ದಾರಿ ಯಾಕೆ ಕೇಳ್ತೀರಿ?

ಇಮೇಜ್

ಶಿವಪೂಜೆಯಲ್ಲಿ ಕರಡಿ ಬಿಟ್ಟವರಾರು?

ಇಮೇಜ್

ರೋಗಿ ಬಯಸಿದ ಮಲಯಾಳಿ ನರ್ಸಮ್ಮ

ಹುಲಿರಾಯ