ಅವಳು ಒಳ ಬರಲು ಅವನು ಕಾಜಿನ ಕದ ತೆರೆದ..
ಅವನು Stripes ಇರೋ Shirt, ಬ್ಲೂ jeans ಹಾಕಿದ್ದ. ಶರ್ಟ್ ಕಿಸೆಯಲ್ಲಿ ಕನ್ನಡಕ, ವೆಲ್-ಸೆಟ್ ಕೂದಲು ಹೊಂದಿದ್ದ. Puma ಬೆಕ್ಕಿನ ಚಿತ್ರ ಉಳ್ಳ ಶೂ ಧರಿಸಿದ್ದ. ಅವಳಿಗಾಗಿ ಚೇರ್ ಸರಿಸಿ 'Please sit down..' ಅಂದಿದ್ದ.
ಅವನು ಸರಿಸಿದ ಚೇರ್ ಮೇಲೆ ನಾಜೂಕಾಗಿ ತನ್ನ ಪರ್ಸ್ ಟೇಬಲ್ ಮೇಲೆ ಇಟ್ಟು ಕುಳಿತುಕೊಂಡಳು. ಮುಖ ಕಾಣಲಿಲ್ಲ, ಮೈಮಾಟವಷ್ಟೇ ಕಂಡಿದ್ದು. ಅಷ್ಟೇ ಸಾಕು ಅನ್ನಿಸೋ ಥರ ಇತ್ತು. ಆ ಹಳದಿ ಬಣ್ಣದ ನುಣುಪಾದ ಸೀರೆ ಎಷ್ಟೇ ಹಿಡಿದಿಡೋಕೆ ಪ್ರಯತ್ನ ಪಟ್ಟರೂ ಅದನ್ನ ಮೀರಿ ಅವಳ ಅಂದ ಹೊರಚೆಲ್ಲಿತ್ತು. ಅವಳುಟ್ಟ sleeve-less blouse ಅವಳ ಬೆನ್ನಿಗೆ ಪೂರ್ತಿ ಸ್ವಾತಂತ್ರ್ಯ ಕೊಟ್ಟಿತ್ತು. ಕಾಣದ ಅವಳ ಮುಖದ ಬಣ್ಣಕ್ಕೆ ಅವಳ ಬೆನ್ನಿನ ಬಣ್ಣ index ನಂತೆ ಕಾಣುತ್ತಿತ್ತು. ಭುಜದ ಮೇಲಿಂದ ಇಳಿದು ಬಂದ ಸೆರಗು 'Sinusoidal wave' ನ ಆಕಾರದಲ್ಲಿ ಜೋತು ಬಿದ್ದಿತ್ತು. ಸೀರೆಯ ಮಡಿಕೆಗೂ, ಸೊಂಟದ ಮಡಿಕೆಗೂ ಸ್ಪರ್ಧೆ ನಡೆದಿತ್ತು. ಆ ಸ್ಪರ್ಧೆಯಲ್ಲಿ ಸೊಂಟ ಗೆದ್ದಿತ್ತು. ಮಡಿಕೆಗಳೇ ಇರದ ಸೊಂಟ ಅಲ್ಲಿದ್ದ ಜನರ ಕಣ್ಣಿಗೆಲ್ಲ temptation ಆಗಿದ್ದು ಅವಳಿಗೂ ಗೊತ್ತಿತ್ತು. ಸೆರಗನ್ನು ಸರಿಪಡಿಸಿ ಮತ್ತೆ ಕೂತಳು ಆ ಬೆಡಗಿ.
ಮೆನು ಕಾರ್ಡ್ ನ ಕೆಳಗೆ ಇಟ್ಟು ಅವಳು ನೋಡಿದ್ದು ಅವನ ಮುಖವನ್ನ, ನಾನು ನೋಡಿದ್ದು ಅವಳ ಮುಖವನ್ನ. Beautifull!! ಮನಸು ಹೇಳಿದ್ದು. ಇಂಡಿಯಾ ಮ್ಯಾಪ್ ಗೆ ಜಮ್ಮು-ಕಶ್ಮೀರ, ಶಿವನ ತುರುಬಕ್ಕೆ ಚಂದ್ರ, ನಮ್ಮೂರ ತೇರಿಗೆ ಕಳಶ. ಹಾಗೆ ಅವಳ ದೇಹಸಿರಿಗೆ ಆ ಸುಂದರ ಮುಖ. ಮಾರು ಹೋಗಿದ್ದ ಅವಳ ಮುಂದೆ ಕುಳಿತ ಆ ಹುಡುಗ ಕೂಡ.
ಅವನು.. 'So.. what would you like to order?' ಅಂದ..
'ಆಂ... a cappuccino would do' ಅಂದಳು.
ಆ ತುಟಿಗಳಿಂದ ಇನ್ನು ಶಾಶ್ವತವಾಗಿ ಹೊರಗೆ ಬರುತ್ತಿದ್ದೇವೆ ಅನ್ನೋ ದು:ಖ ಒಂದೆಡೆ ಆದರೆ, ಅದೇ ತುಟಿಗಳಿಂದ ಹಾದು ಹೊಗುತ್ತಿದ್ದೇವೆ ಎಂಬ ಖುಷಿ ಒಂದೆಡೆ... ಅವಳಾಡಿದ ಆ ಪದಗಳಿಗೆ.
ದೂರದಲ್ಲಿ ನನ್ನ ಜಾಗೆಯಲ್ಲೇ ಕುಳಿತು ಗಮನಿಸುತ್ತಿದ್ದೆ ನಾನು. ಜಾಸ್ತಿ ಸಲಿಗೆ ಇಲ್ಲದೆ decent ಆಗೇ ನಡೆದುಕೊಳ್ಳುತ್ತಿದ್ದರು. ಅವಳು ಕಡೆ ನೋಡೋವಾಗ ಅವನು ಅವಳನ್ನೇ ನೋಡೋದು, ಅವಳು ಅವನಿಂದ ಕಣ್ಣು ಮರೆಸಿ ಮರೆಸಿ ಅಲ್ಲಿ ಇಲ್ಲಿ ನೋಡೋದು.
ನನ್ನ ಹಾಗೆ ಇನ್ನೊಬ್ಬ ಇದೇ ಜೋಡಿನ ನೋಡುತ್ತಾ ಕೂತಿದಾನೆ ಕಣ್ಣು ಬಿಡದೆ, ನನಗೆ diagonally opposite ಮೂಲೆ ನಲ್ಲಿ . ಅವನೂ ಹಾಕಿದ್ದು ಅದೇ ಹಳದಿ ಬಣ್ಣದ ಟೀ-ಶರ್ಟ್. ನೋಡೋಕೆ ಸುಮಾರಾಗಿ ಇದ್ದ. Specific ಆಗಿ ಹೇಳಬೇಕೆಂದರೆ ಆ ಸುಂದರಿಯನ್ನೇ ನೋಡುತ್ತಿದ್ದ ಆ ಮೂಲೆ ಪ್ರೇಕ್ಷಕ. ಯಾಕ್ ನೋಡಬಾರದು, ಅಷ್ಟು ಸುಂದರಿ ಅವಳು ಅನ್ನಿಸ್ತು. ಮೊದ ಮೊದಲು ನಾರ್ಮಲ್ ಅನ್ನಿಸಿದ್ದು ಹೊತ್ತು ಕಳೆದಂತೆ ಅವನ ನೋಟ ಯಾಕೋ irritating ಅನ್ನಿಸ್ತು. ಕೈಯಲ್ಲಿ ನೆಪ ಮಾತ್ರಕೆ ಒಂದು ಕಾಫಿ ಮುಗ್ ನ ಹಿಡ್ಕೊಂಡು ಅವಳನ್ನೇ ಗುರಾಯಿಸ್ತಾ ಕೂತಿದ್ದ. ಏನೇ ಅನ್ನಿ ಹಾಗೆ ಹುಡುಗೀರನ್ನ ಗುರಾಯಿಸಬಾರದು. ಪಾಪ ಆ ಹೆಣ್ಣು ಮಗು, ಅಂತ ಅನ್ನಿಸಿ ನಾನು ಮತ್ತೊಮ್ಮೆ ಅವಳನ್ನ ನೋಡಿದೆ ಸುಮಾರು 46 ನೇ ಸಾರಿ ;).
ಅಲ್ಲಿನ T.V ಸದ್ದು ಹಠಾತ್ತನೆ ಕಡಿಮೆ ಆದಾಗ ಅವನ ಒಂದು ಮಾತು ಕೇಳಿಸಿತು.
'ಮತ್ತೆ ಹೇಳಿ.. what are your hobbies?..'
ಮತ್ತೆ ಸದ್ದು ಜಾಸ್ತಿ ಆದೊಡನೆ ಅವಳ ಉತ್ತರ ನನಗೆ ಕೇಳಿಸಲಿಲ್ಲ.
ಅವರಿಬ್ಬರು ಪ್ರೇಮಿಗಳಲ್ಲ!! ಇತ್ತೀಚಿಗಿನ ಹೊಸ trend ಪ್ರಕಾರ ಅವನು ಅವಳನ್ನು ನೋಡಲು ಬಂದ ಹುಡುಗ. ಕಾಫಿ ಡೇ ನಲ್ಲಿ ಹುಡುಗಿ ನೋಡುವ ಸಂಪ್ರದಾಯ. ಹುಡುಗ ಹುಡುಗಿ ಮನೆ ಇಂದ ಆಚೆ ಇದ್ದು working ಆಗಿರೋದ್ರಿಂದ, ತಂದೆ ತಾಯಂದಿರು ಮೊದಲು ಹುಡುಗ-ಹುಡುಗಿ ಒಬ್ಬರನ್ನೊಬ್ಬರು ನೋಡಿಕೊಳ್ಳಲಿ ಎಂದು informal ಆಗಿ ಈ ಭೇಟಿ ನ arrange ಮಾಡ್ತಾರೆ, ತಾವು ಊರಲ್ಲೇ ಕುಳಿತು. ಹುಡುಗ ಹುಡುಗಿಗೆ ಓಕೆ ಆದರೆ ಮುಂದಿನ ಮಾತು. ಈಗೀಗ CCD ಗಳಲ್ಲಿ ಈ ದೃಶ್ಯ ಸರ್ವೆ ಸಾಮಾನ್ಯ.

ಆ ಹುಡುಗನ ಮುಖದಲ್ಲಿರೋ ಸಂತೋಷ ಉತ್ಸಾಹ ಹುಡುಗಿಯ ಮುಖದಲ್ಲಿ ಇರಲಿಲ್ಲ. Formality ಗೆ ನಕ್ಕಂತೆ ನಗು, ಅತ್ತ ಇತ್ತ ಆಡೋ ಕಣ್ಣುಗಳು , ಹೇಗಾದರೂ ಮಾಡಿ ಈ ಮೀಟಿಂಗ್ ಮುಗಿದರೆ ಸಾಕಪ್ಪ ಅನ್ನೋ ಹಾಗಿದ್ಲು. ಅವನು ಹಾಕೋ ಪ್ರಶ್ನೆಗಳಿಗೆ ಉತ್ತರಕ್ಕಷ್ಟೇ ಆಗೋ ಅವಳ ಮಾತುಗಳು. ಆ ಸುಂದರಿ ತನ್ನ mobile ಅನ್ನು ಹಿಡಿದು ಏನೋ ಮಾಡಿದಂತಿತ್ತು..
ಅಷ್ಟರಲ್ಲಿ..
'Hey.. ಇನ್ನು ಸ್ವಲ್ಪಾನೆ ಹೊತ್ತು ಕಣೋ.. ಮುಗೀತು ' ನನ್ನ ಫೋನ್ ಗೆ ಸಂದೇಶ..
'ಎಷ್ಟೇ ಕಾಯಿಸ್ತಿಯ ಈಡಿಯಟ್!.. ' ನಾನು ಹುಸಿ ಮುನಿಸಲ್ಲಿ..
'ಜಾಸ್ತಿ ಹೊತ್ತೆನಿಲ್ಲ್ವೋ.. ಇವನು ತುಂಬಾ ಮಾತಾಡ್ತಿದಾನೆ. ಬೇಗ ಮುಗಿಸಿಬಿಡ್ತೀನಿ.. ನೀನ್ ಏನೋ ಮಾಡ್ತಿದಿಯ ಕಪಿ.. '
'ನಾನ.. ಒಂದು ಸುಂದರವಾದ ಹುಡುಗೀನ ನೋಡ್ತಾ ಕೂತಿದಿನಿ.. '
'ಓಹೋ!! ನನಗಿಂತ ಸುಂದರಿನೇನೋ ಅವಳು ??'
'ಅನ್ಸತ್ತೆ '... ";)" ಈ smiley ನಾ ಹಾಕೋದ್ ಮರಿಲಿಲ್ಲ.
'ಆಯ್ತು continue ಮಾಡು. ಬರೀ ನೋಡೋದಷ್ಟೇ ನಿಂದು, ಕೈಲಿ ಏನು ಆಗೋದಿಲ್ಲ ' ಅವಳ ತುಂಟ ಮಾತು.
ನಾನು reply ಮಾಡೋದನ್ನ ಮರೆತೇ ಅನ್ಸತ್ತೆ. ಆ ಮೂಲೆ ಪ್ರೇಕ್ಷಕ, ಅದೇ ಆ ಹಳದಿ ಶರ್ಟ್ ಹುಡುಗ ಈ ಹುಡುಗಿ ನಾ ಜಾಸ್ತಿನೆ ನೋಡ್ತಿದಾನೆ. ಸ್ವಲ್ಪ ಇರುಸು ಮುರುಸು ನನಗೇ ಆಗೋಯ್ತು. ನೇರ ಅವನ ಹತ್ತಿರ ಹೋದೆ..
'Excuse me.. ಏನ್ ಬೇಕು ರೀ ನಿಮಗೆ ' ಅಂತ ಕೇಳೆಬಿಟ್ಟೆ..
ಅವನು ಕೈ ಸನ್ನೆ ಮಾಡುತ್ತಾ 'Nothing ' ಅಂತ ಅಂದ..
ಸುಮ್ಮನೆ ನನ್ನ seat ಮೇಲೆ ಬಂದು ಕುಳಿತೆ ನಾನು.
'Hey.. ಐದೇ ಐದು ನಿಮಿಷ.. ಮುಗೀತು ' ನನ್ನ mobile ಗೆ message.
'Hello.. ಜಾಸ್ತಿ ಆಯ್ತೆ ನಿಂದು. ಇನ್ನು ಆಗಲ್ಲ ನನ್ನ ಕೈಲಿ. ೫ ನಿಮಿಷ ಜಾಸ್ತಿ ಆದರೆ ನಾನೇ ಅಲ್ಲಿ ಬಂದು ಬಿಡ್ತೀನಿ ಅಷ್ಟೇ ' ಅಂತ ಕೋಪದಿಂದ ನೆ reply ಮಾಡಿದೆ .
'Oye ಕಪಿ.. ಹಾಗೇನಾದರು ಮಾಡಿಯ.. ಐದೇ ನಿಮಿಷ ಕಣೆ ಲಕ್ಷ್ಮೀ ' ಅಂತ ಅಂದ್ಲು..
ಲಕ್ಷ್ಮೀನಾರಾಯಣ ಅಂತ ಇರೋ ನನ್ನ ಹೆಸರನ್ನ ಪ್ರೀತಿಯಿಂದ 'ಲಕ್ಷ್ಮೀ ' ಅಂತ ಕರೆಯೋಳು. ಹುಡುಗಿ ಥರ ನನ್ನ address ಮಾಡೋದ್ರಲ್ಲಿ ಅದೇನು ಖುಷಿನೋ ಅವಳಿಗೆ.
ಅಂತು ಇಂತೂ ಆ ಜೋಡಿಯ ಮೀಟಿಂಗ್ ಮುಗೀತು. ಹುಡುಗ ಮತ್ತೆ ಎದ್ದು ಅವಳ ಚೇರ್ ಸರಿಸಿದ. ಆ ನೀರೆ ತನ್ನ ಸೀರೆ ಸರಿ ಮಾಡುತ್ತಾ ಪರ್ಸ್ ತಗೊಂಡು ಎದ್ದಳು. ಇಬ್ಬರು ಹೊರ ನಡೆದರು . ಅವಳು ನೋಡಲು ಹಿಂದಿನಿಂದ ಇನ್ನೂ ಅಂದವಾಗಿ ಕಂಡಳು.
೧೦ ನಿಮಿಷದ ನಂತರ..
'ಎಲ್ಲಿದ್ದಿಯ ಈಗ ??' ನನಗೆ ಮತ್ತೆ ಮೆಸೇಜ್..
'ಇಲ್ಲೇ ಇದ್ದೀನಮ್ಮ busy girl! ಅದೇ CCD ನಲ್ಲಿ ' ನನ್ನ reply.
ಮತ್ತೆ ಹತ್ತು ನಿಮಿಷ ಕಳೆದಿರಬೇಕು ಆ ಹಳದಿ ಸೀರೆಯ ನೀರೆ ವಾಪಾಸ್ ಬಂದಳು.. ಈ ಸಾರಿ ಒಬ್ಬಳೇ.
ಒಳ ಬರುತ್ತಾ ನೇರ ಆ ಹಳದಿ ಶರ್ಟ್ ಹುಡುಗನ ಟೇಬಲ್ ಮೇಲೆ ಕುಳಿತುಬಿಡೋದೇ!!!!!!...
ಒಳ ಬರುತ್ತಾ ನೇರ ಆ ಹಳದಿ ಶರ್ಟ್ ಹುಡುಗನ ಟೇಬಲ್ ಮೇಲೆ ಕುಳಿತುಬಿಡೋದೇ!!!!!!...
ನನಗಾದಷ್ಟೇ ಆಶ್ಚರ್ಯ ಅಲ್ಲಿ ಇನ್ನೂ ಕೂತೇ ಇದ್ದ ಕೆಲವರಿಗೂ ಆಯ್ತು. ಅವಳು ಅವನ ಎರಡೂ ಕೈ ಬೆರಳುಗಳನ್ನು ತನ್ನ ಎರಡೂ ಕೈಗಳಿಂದ ಸಮಾಧಾನ ಮಾಡುತ್ತಾ ಕೂತಿದ್ದಳು . ಅವಳಿಗಾಗಿ ಅಷ್ಟೊತ್ತು ಕಾದಿದ್ದಕಾಗಿ ಮುನಿಸಿಕೊಂಡಿದ್ದ ಅವನು ಅವಳ ಪ್ರೀತಿಗೆ ಕರಗುತ್ತಿದ್ದ. ಅವರಿಬ್ಬರು ಪ್ರೇಮಿಗಳು!! ಅದಕ್ಕೆ ಆ ಹಳದಿ ಬಣ್ಣ ಮ್ಯಾಚ್ ಆಗಿದ್ದು ಆನಿಸ್ತು ನನಗೆ. ಅವಳೇ ಅವನಿಗೆ ನೀನು ಇದೆ ಬಣ್ಣದ ಬಟ್ಟೆ ಹಾಕು ಅಂತ ಹೇಳಿರಬೇಕು. ಹಾಗಾದರೆ ಆ Gentleman ಯಾರು ?.. ಅವಳಪ್ಪ ತೋರಿಸಿದ ಗಂಡು ಇರಬೇಕು.
'ಹತ್ತು ನಿಮಿಷದಲ್ಲಿ ನಾನು ಸಿಗ್ನಲ್ ಹತ್ತಿರ ಬರ್ತೀನಿ.. ಬಾ ಅಲ್ಲಿ ' ನನ್ನ ಹುಡುಗಿಯ ಸಂದೇಶ..
'ಬಂದೆ.. ' -ನಾನು.
ಅಂದಹಾಗೆ ನಾನೊಬ್ಬ aspiring ಫಿಲಂ-ಮೇಕರ್. ಬೆಳಿಗ್ಗೆ DOP ಕೋರ್ಸ್ ಮಾಡ್ತಾ, ಸಂಜೆ CCD ನಲ್ಲಿ ಪಾರ್ಟ್-ಟೈಮ್ ಜಾಬ್ ಮಾಡ್ತೀನಿ. ನನ್ನ ಹುಡುಗಿ M.G ರೋಡಲ್ಲಿರೋ IT ಕಂಪನಿ ಲಿ ಸಾಫ್ಟ್ವೇರ್ ಇಂಜಿನಿಯರ್, ಮೀಟಿಂಗ್ ಮುಗಿಸಿ ನನ್ನ ಭೇಟಿ ಆಗಲು ಬರುತ್ತಿದ್ದಾಳೆ . ಎರಡು ವರ್ಷ ಮುಂಚೆ ನಾನು IT ನಲ್ಲೆ ಕೆಲಸ ಮಾಡ್ತಿದ್ದೆ. passions ಗಳ ಬೆನ್ನು ಹತ್ತಿ, ಫಿಲಂ ಇಂಡಸ್ಟ್ರಿ ಅಂತಹ ಕ್ರಿಯೇಟಿವ್ ಫೀಲ್ಡ್ ಅಲ್ಲಿ ಕೆಲಸ ಮಾಡಲು ನನ್ನದೇ ಆದ ತಯಾರಿ ಗಳನ್ನ ಮಾಡಿಕೊಳುತ್ತಿದ್ದೇನೆ. ಕನಸಿನ ಕುದುರೆಯನ್ನೆರೋ ಪ್ರಯತ್ನ.
ಆ "ಹಳದಿ-ಬಣ್ಣದ " ಪ್ರೇಮಿಗಳು ಹೊರಟುನಿಂತರು ಇನ್ನೇನು. ಅವನು ಅವಳ ಚೇರ್ ಸರಿಸಲಿಲ್ಲ ಬದಲಾಗಿ ಅವಳ ಕೈ ಹಿಡಿದ. ಅದು ಪ್ರೀತಿಯಲ್ಲಿರೋ ಸಲಿಗೆ. ಒಂದು ಘಂಟೆ ಮುಂಚೆ ಅವಳ ಮುಖದಲ್ಲಿದ್ದ ಭಯ, ಇರುಸು-ಮುರುಸು ಈಗ ಮಾಯ. ತುಟಿಗಳು ಮಂದಹಾಸ ಬೀರುತ್ತಿವೆ. ಅವರಿಬ್ಬರ ಕೈಗಳು ಅಂಟಿಕೊಂಡಿವೆ. ಬಾಗಿಲತ್ತ ನಡೆದರು.
ಅವನು ಅವಳ ಬಣ್ಣದ ಲೋಕಕ್ಕೆ ಕಾಜಿನ ಕದ ತೆರೆದ..

No comments:
Post a Comment