Sunday, July 14, 2013

Office cab





We need to touch the base together.. let me know when you have extra bandwidth for this..’ –Francis ಫೋನ್ ನಲ್ಲಿ. 


‘Sure frank!' - ಈಕಡೆ ಇಂದ. 

sideways lap-top ಬ್ಯಾಗ್ ನಾ ಹಾಕೊಂಡು ಸೀಟ್ ಇಂದ ಎದ್ದ. ಸುಮಾರು 28-29 ವರ್ಷ ವಯ್ಯಸ್ಸು. ಕಥಾನಾಯಕ ಒಬ್ಬ ಸಾಫ್ಟ್ವೇರ್ ಇಂಜಿನಿಯರ್. ಸ್ಟೇಟಸ್ ಕಾಲ್ ಮುಗಿಸಿ ಒಮ್ಮೆ ಗಡಿಯಾರ ನೋಡಿಕೊಂಡ. ಆಗಲೇ 8:20. ಸರಿಯಾಗಿ 8:30 ಗೆ ಇರತ್ತೆ ಕಂಪನಿ ಕ್ಯಾಬ್. ಎರಡು ಘಂಟೆ ಪ್ರ್ಯನಾ ತನ್ನ ಮನೆಗೆ. ಕ್ಯಾಬ್ ಗಳು ನಿಲ್ಲೋ ಪಾರ್ಕಿಂಗ್-ಏರಿಯಾ ಹತ್ತಿರ ಹೆಜ್ಜೆ ಹಾಕಿದ. ಸ್ವಲ್ಪ ದೂರದಲ್ಲಿ ನಿಂತು ತನ್ನ ಬ್ಯಾಗ್ ನಲ್ಲಿನ ಸಿಲ್ವರ್ ಕಲರ್ ನ thermos-flask ಥರ ಇರುವ ಬಾಟಲಿ ಇಂದ ಎರಡು ಸಾರಿ ನೀರನ್ನು ಕುಡಿದು ಕ್ಯಾಬ್ ಒಳಗೆ ಹತ್ತಿದ್ದ. ಮುಂದೆ ಸುಮಾರು ಸೀಟ್ ಖಾಲಿ ಇದ್ರೂ ತೀರ ಹಿಂದಿನ ಸೀಟಿನಲ್ಲೇ ಹೋಗಿ ಕೂತುಕೊಂಡ. ಬಸ್ ನಲ್ಲಿ ಅಷ್ಟೂ ಜನ ಒಮ್ಮೆ ನೋಡಿದರು ಇವನನ್ನ. ಯಾರನ್ನೂ ಮಾತಾಡಿಸದೇ ತನ್ನ ಸೀಟಿನಲ್ಲಿ ಸೆಟ್ಲ್ ಆಗ್ತಾನೆ. i-pod ಹಚ್ಚಿ ಹಾಡು ಕೇಳುತ್ತ ಮಲಗುತ್ತಾನೆ. ಏಳೋದು ಒಮ್ಮೇ  ತನ್ನ ಮನೆ ಬಂದ  ಮೇಲೇನೆ. ನಡು ನಡುವೆ ಎಚ್ಚರ ಆದರೆ ಮತ್ತೆ ಅದೇ ಬಾಟಲಿ ಇಂದ ನೀರು ಕುಡಿದು ಕಣ್ಣು ಮುಚ್ಚುತ್ತಾನೆ. ಪ್ರತಿ ನಿತ್ಯ ಹೀಗೆ. ಬಸ್ ನಲ್ಲಿ ಇರೋ ಸ್ವಲ್ಪ ಜನಕ್ಕೆ ಒಂದು ಅನುಮಾನ . ಆ ಬಾಟಲಿ ಇಂದ ಅವನು ಕುಡಿಯೋದು ನೀರು ಅಲ್ಲ, ಹಾಟ್-ಡ್ರಿಂಕ್ಸ್ ಅನ್ಸತ್ತೆ .  ಅವನ ಪಕ್ಕ ಹೋದರೆ ಆ ಥರ ಸ್ಮೆಲ್ ಕೂಡ ಬರುತ್ತೆ. ಅದಕ್ಕೆ ಇರಬೇಕು ಅವನು ತೀರ ಕಡೆಯ ಸೀಟ್ ನಲ್ಲಿ ಕೂರೋದು.

ಆವತ್ತು ಹಾಗೆ. ಬಸ್ ಒಳಗೆ ಬಂದು ತನ್ನ ಸೀಟ್ ನಲ್ಲಿ ಕೂತ. ಬಾಟಲಿ ಇಂದ ನೀರು ಕುಡಿದು ಕಣ್ಣು ಮುಚ್ಚಿದ. 

ನಿದ್ದೆ. ಕನಸು. ಕನಸಿನಲ್ಲಿ ಅವಳು... 

'ಹುಡುಗಿ ನೆರಳು, ಕತ್ತಲಲಿ ಮುಖ ಕಾಣಿಸುತ್ತಿಲ್ಲ. ನೆರಳಲ್ಲೇ ಬೆಳಕಿನ ಹಾಗೆ ಅಷ್ಟೋ ಇಷ್ಟೋ ಕಾಣಿಸುತ್ತಾಳೆ. ಅತ್ತ ಇತ್ತ ಅಡ್ಡಾಡುತ್ತಾಳೆ. ಏನನ್ನೋ ಹುಡುಕುತ್ತಾಳೆ. ಇವನನ್ನು ಹೆಸರು ಹಿಡಿದು ಕರೀತಾಳೆ. ಮೈಯ್ಯೆಲ್ಲ ಬೆವರು. i'm a bad bad girl, i'm gonna rock your world..witha gun in my hand, coz i'm a bad bad girl.. ಕಿವಿಯಲ್ಲಿ ಹಾಕಿರೋ   i-pod ಹಾಡಿನ ಶಬ್ದ ಅದು. ಕನಸಲ್ಲೇ ಯಾವುದೋ ಹುಡುಗಿ ಹಾಡಿದಂತಿದೆ. ಕನಸು ಯಾವುದು , ನಿಜ ಯಾವುದು ಅಂತ ಯೋಚಿಸುವಷ್ಟು ಎಚ್ಚರ ಇಲ್ಲ ಮನಸಿಗೆ. 'bye ಆದಿ' ಅಂತ ಯಾವುದೋ ಹೆಣ್ಣು ಧ್ವನಿ ಪ್ರತಿಧ್ವನಿಸುತ್ತಿದೆ.. 

ಒಂದೂ-ವರೆ ಘಂಟೆಯ ನಂತರ ಹಾರ್ನ್ ಶಬ್ದಕ್ಕೆ ಎಚ್ಚರ ಆಗಿತ್ತು. ಕಣ್ಣು ಬಿಟ್ಟರೆ ಅವನ ಮನೆ. ಬ್ಯಾಗ್ ಹಾಕಿಕೊಂಡು ಬಸ್ ಇಳಿದ.  

ದಿನಾಲು ಹೀಗೆ ನಡೀತಿತ್ತು. ಬಸ್ ನ ಆ ಕೊನೆಯ ಸೀಟ್ ಅವನಿಗೆಂದೆ ಕಾದಿರುತ್ತಿತ್ತು. ಬಸ್ ನಲ್ಲಿ ಇದ್ದವರಿಗೆ ಇದೆಲ್ಲ ರೂಢಿ ಆಗಿತ್ತು. ಈತ ಒಂಥರಾ ಮನುಷ್ಯ, ಅವನ ಪಾಡಿಗೆ ಅವನನ್ನು ಬಿಡುವುದು ಸೂಕ್ತ ಅಂತ ಕೆಲುವು ಜನ. ಇವನಿಗೆ ಜಂಭ, ದುಡ್ಡಿನ ಮದ.. ಕುಡ್ಕೊಂಡೆ ಮಲಗುತ್ತಾನೆ, ಯಾರನ್ನು ಮಾತನಾಡಿಸುವುದಿಲ್ಲ ಅಂತ ಹಲವರು ಅಂದುಕೊಂಡಿರಬಹುದು. ಕೆಲವರಂತೂ ಈತ ಮೂಗ ಇರಬಹುದು ಅಂದುಕೊಂಡಿದ್ದರು. ಬಸ್ ಡ್ರೈವರ್ ಸಹ ಈತನಿಗೆ ಕೊಬ್ಬು ಜಾಸ್ತಿ ಅಂತ ಅಂದುಕೊಂಡು ಮಾತನಾಡಿಸುವ ಗೋಜಿಗೆ ಹೋಗಿರಲಿಲ್ಲ. ಹೀಗೆ ನಡೀತಿರಬೇಕಾದರೆ ಒಂದು ದಿನ ಮಾತ್ರ.. . 

ಬಸ್ ಚಲಿಸುವ ರಭಸಕ್ಕೆ ಗಾಳಿ ಕಿಟಕಿಯಿಂದ ಜೋರಾಗಿ ಬರುತ್ತಿತ್ತು. ಛಳಿಗೆ ಕಣ್ಣು ಬಿಟ್ಟು ನೋಡಿದರೆ ಜೋರು ಮಳೆ ಬರುತ್ತಿದೆ. ತನ್ನ ಕಿಟಕಿಯನ್ನು ಹಾಕಿದ. ಏನೋ ಶಬ್ದ, ನೋಡಿದರೆ ಮುಂದೆ ಕೂತ ಹುಡುಗಿ ಕಿಟಕಿಯನ್ನು ಹಾಕಲು ಕಷ್ಟ ಪಡುತ್ತಿದ್ದಾಳೆ. ಎರಡು ಕೈಗಳಿಂದ ವಿಶ್ವ ಪ್ರಯತ್ನ ಮಾಡಿ, ಕಿಟಕಿ ಹಾಕಲಾಗದೆ ಸುಸ್ತಾಗಿದ್ದಾಳೆ. ಒಮ್ಮೆ ಹಿಂದೆ ತಿರುಗೆ ಇವನನ್ನ ನೋಡುತ್ತಾಳೆ. ಹೊಸ ಮುಖ. ಈ ಬಸ್ಸಿನಲ್ಲಿ ಇವಳನ್ನು ಇದೆ ಮೊದಲ ಬಾರಿ ನೋಡಿದ್ದು. ಅಥವಾ ಮೊದಲಿಂದಲೂ ಇದೆ ಬಸ್ಸು ಇರಬಹುದು. ತನಗೆ ಈಗೀಗ ಯಾರ ಪರಿಚಯವೂ ಇಲ್ಲ ಅಷ್ಟಾಗಿ ಇಲ್ಲಿ. ಅವಳು ಮತ್ತೊಮ್ಮೆ ತಿರುಗಿ ನೋಡಿದಾಗ ಸೀಟ್ ಇಂದ ಎದ್ದು ಅವಳ ಕಿಟಕಿಯನ್ನ ಹಾಕಲು ಸಹಾಯ ಮಾಡಿದ. 'Thank you for that..' ಅಂದಳು ಹುಡುಗಿ. ಹೊಸ ಪರಿಚಯದ ಸಲಿಗೆ ಇಂದ. ಅವಳನ್ನ ಒಮ್ಮೆ ನೋಡಿ that's ok  ಅನ್ನೋ ಥರ ತಲೆ ಆಡಿಸಿ ಮತ್ತೆ ತನ್ನ ಸೀಟಿನಲ್ಲಿ ವಿರಾಜಮಾನನಾದ. ಗುಡುಗು ಮಳೆ ಗಾಳಿಯ ಶಬ್ದ ಆ ಕಿಟಕಿಯ ಜೊತೆ ಮುಚ್ಚಿ ಹೋಗಿತ್ತು. ಕನಸಿನಲ್ಲಿ ಬರುತ್ತಿದ್ದ ವಿಚಿತ್ರವಾದ ಶಬ್ದ ಕೂಡ ಕಣ್ಣು ಬಿಟ್ಟೊಡನೆ ಮುಚ್ಚಿ ಹೋಗಿತ್ತು. ಮತ್ತೊಮ್ಮೆ bottle ನಿಂದ ಏನನ್ನೋ ಕುಡಿದು ಕಣ್ಣು ಮುಚ್ಚಿದ. ಆ ಮುಂದಿನ ಕಿಟಕಿಯ ಹುಡುಗಿ ಹಾಗೆ ನೋಡುತ್ತಿದ್ದಳು. 

'Excuse-me, If you don't mind can I have some water please..' ಅಂತ ಆ ಸಿಲ್ವರ್ thermos flask ನತ್ತ ಕೈ ಮಾಡಿ ಕೇಳಿದಳು. 

ಅಕ್ಕ ಪಕ್ಕ ಕೂತೊರಿಗೆಲ್ಲ ಆಶ್ಚರ್ಯ, ಅವರು ನೋಡಿದ ಹಾಗೆ ಇವನನ್ನು ಮಾತನಾಡಿಸಿದ ಮೊದಲ  ಇವಳು. ಆ ಬಾಟಲಿ ಅಲ್ಲಿ ಏನಿದೆಯೋ, ಅದನ್ನು ಅವಳಿಗೆ ಕೊಡುತ್ತಾನೋ ಅಥವಾ ಇಲ್ಲ ಅಂತಾನೋ. ಹೊಸ ಹುಡುಗಿ ಬಸ್ ನಲ್ಲಿ ಪಾಪ ಅವಳಿಗೆ ಇವನ ಬಗ್ಗೆ ತಿಳಿದಿಲ್ಲ ಅಂತ ಎಲ್ಲರೂ  ವಾರೆ ಗಣಿಂದ ಅವರನ್ನೇ ನೋಡುತ್ತಿದ್ದರು. 

ಅವನು ತನ್ನ bottle ನ ನೋಡಿದ ಒಮ್ಮೆ ನಕ್ಕು. ತಲೆ ಅಡ್ಡಡ್ಡ ಆಡಿಸಿ ಸಾರೀ ಅಂತ ಅಂದಿದ್ದ. ಎಲ್ಲರೂ ಆ ಹುಡುಗಿನೇ ನೋಡುತ್ತಿದ್ದರು. ಪಾಪ ನೀರು ಅಂತ ಕೇಳಿದರೆ ಈತ ಇಲ್ಲ ಅಂದುಬಿಡೋದೇ ಅಂತ. ಅವಳಿಗೆ ಸ್ವಲ್ಪ embarrassed ಅನ್ಸಿದ್ರು ನೋ ಪ್ರಾಬ್ಲಮ್, ಇಟ್ಸ್ ಓಕೆ ಅಂತ ಮುಂದೆ ತಿರುಗಿ ಕೂತಿದ್ಲು. ಮುಂದಿನ ಸೀಟ್ ನಿಂದ ಯಾರೋ bottle ಪಾಸ್ ಮಾಡಿದರು, ಆ ನೀರನ್ನು ಕುಡಿದು thank you ಅಂತ ಹೇಳಿ ತನ್ನ ಸೀಟಿನಲ್ಲಿ settle ಆದಳು. 

ಮರುದಿನ ಇವಳು ಕಿಟಕಿಯ ಸೀಟಿನಲ್ಲಿ ತುಸು ಬೇಗನೆ ಬಂದು ಕೂತಿದ್ದಳು. ಹೊತ್ತಾಗೊವಷ್ಟರಲ್ಲಿ ಕಿಟಕಿಯಲ್ಲಿ ಆ ಹುಡುಗ ಬಂದದ್ದು ಕಂಡಿತು. ಅವನು ಎಂದಿನಂತೆ ಒಂದು ಸಿಗರೆಟ್ ಹಚ್ಚಿ, ತುಸು  ನಿಂತು bottle ನಲ್ಲಿ ಏನನ್ನೋ ಕುಡಿದು ಸೀದಾ ಬಸ್ ಹತ್ತಿ ಹಿಂದಿನ ಸೀಟಿನಲ್ಲಿ ಬಂದು ಕುಳಿತ. ಒಂದು ವಾರ ಪೂರ್ತಿ ಅವನನ್ನು observe ಮಾಡಿದ್ದಳು.  ದಿನ ಅದೇ behavior  ಬೇರೆಯವರನ್ನ ಕೇಳಿ ತಿಳಿದಿದ್ದಳು ಅವನು ತುಂಬಾ reserved ಮನುಷ್ಯ ಅಂತ. ಅದೇ ಒಂದು ವಾರದಲ್ಲಿ ಬೇರೆ ಎಲ್ಲರಿಗೂ ಪರಿಚಯ ಆಗಿದ್ದಳು. ಮೊದಲೇ ಮಾತು ಜಾಸ್ತಿ ಇವಳದ್ದು. 

ಈಗ ತಾನೇ engineering ಮುಗಿಸಿ ಬಂದು ಕಂಪನಿ ಸೇರಿದ್ದಳು. ತೀರ ನೇರ ಕೂದಲು, ಮ್ಯಾಚಿಂಗ್ ಕಿವಿ ಓಲೆ ಗಳು, ಸಿಂಪಲ್ ಆದರು attractive ಅನ್ನಿಸುವ ಉಡುಪು. ಎಲ್ಲರ ಜತೆನೂ ಚೆಲ್ಲು - ಚೆಲ್ಲಾಗೆ ಮಾತನಾಡುತ್ತಾಳೆ. ನೋಡೋಕೆ ತುಂಬಾ ಚೆಲುವೆ. ಮೂಗಿನ ಬಲಗಡೆ ಒಂದು ಸಣ್ಣ  ಮಚ್ಚೆ ಇದೆ, ಅದರಿಂದ ಇವಳ ಅಂದ ದ್ವಿಗುಣವಾದಂತಿದೆ. 

ಸ್ವಲ್ಪ ದಿನಗಳ ನಂತರ ಪಕ್ಕದಲ್ಲೇ ಕೂರೋ ಸ್ವಾತಿ ನ ಕೇಳಿದಳು.. 
'ಅಲ್ಲ ಕಣೆ, ದಿನ ಹೀಗೆ ಏನನ್ನೋ ಕುಡಿದೆ ಬಸ್ ಹತ್ತುತ್ತಾನೆ. ಇದನ್ನು ಏನಾದರು officials ನೋಡಿದರೆ ಪ್ರಾಬ್ಲಮ್ ಆಗೋದಿಲ್ವೆ '

'ಆಗತ್ತೆ ನಿಜ, ಬಟ್ ಅವನು ತನ್ನ ಪಾಡಿಗೆ ತಾನು ಇರ್ತಾನೆ. He seems harmless, ಅದಕ್ಕೆ ಯಾರು ತಲೆ ಕೆಡಿಸಿಕೊಂಡಿಲ್ಲ. ಆರು ತಿಂಗಳಿಂದ ಹೀಗೆ, ಮೊದಲು ಸರಿಯಾಗೇ ಇದ್ದನಂತೆ. ಡ್ರೈವರ್ ಹೇಳ್ತಿದ್ದ, ಅವಾಗೆಲ್ಲ ಎಲ್ಲರ ಜೊತೆ ಮಾತನಾಡುತ್ತಿದ್ದ ಅಂತ. ಈ ವಯ್ಯಸ್ಸಲ್ಲೇ ಅದ್ಯಾಕೆ ಕುಡಿತಾರೊ. But He is cute ಅಲ್ವೇನೆ, ಅವನ ಆ heavy attitude ಗೆ ನಾನಂತೂ ಬಿದ್ದೆ ಹೋಗ್ತೀನಿ ' ಅಂತ ನಕ್ಕಿದ್ಲು ಸ್ವಾತಿ. 

ಇವನು ಯಾಕೆ ಹೀಗೆ, ಬೇರೆ ಹುಡುಗರ ಥರ ಯಾಕೆ ಇಲ್ಲ. ಒಬ್ಬನೇ ಇರ್ತಾನೆ, ಯಾರನ್ನು ಮಾತನಾಡಿಸುವುದಿಲ್ಲ, ಯಾವ ಹುಡುಗಿನೂ ಕಣ್ಣೆತ್ತಿ ನೋಡಲ್ಲ. ಏನೋ ಪ್ರಾಬ್ಲಮ್ ಇದೆ. ಹೇಗಾದರೂ ಮಾಡಿ ತಿಳ್ಕೊಬೇಕು ಅಂತ curiosity ಆಗಿತ್ತು . ಒಂದು ದಿನ ಹೇಗಾದರೂ ಮಾಡಿ ಅವನನ್ನ ಮಾತಾಡಿಸಬೇಕು, friendship ಆದರು ಮಾಡಬೇಕು ಅಂತೆಲ್ಲ ಅಂದುಕೊಂಡಳು. ಹುಡುಗ ಬುದ್ಧಿ ಬೇರೆ ಇನ್ನು ಅವಳಿಗೆ. 

ಆವತ್ತು ಅವನ ಪಕ್ಕದ ಸೀಟಿನಲ್ಲೇ ಹೋಗಿ ಕುಂತಳು. ಅವನು ಬಂದು ತನ್ನ ಸೀಟಿನಲ್ಲಿ ಕುಳಿತ. ಬಸ್ ಹೊರಟಿತು, ಸ್ವಲ್ಪ ಹೊತ್ತಿನಲ್ಲಿ ಅವನು ನಿದ್ದೆ ಹೋದ. ಸೈಡ್ ಇಂದ ನೆ ಅವನನ್ನು ನೋಡಿತ್ತಿದಳು. ಒಂದು ಸಾರಿ ಸ್ವಾತಿ ಹೇಳಿದ್ದು ನಿಜ ಅನ್ನಿಸಿತು.. HE IS Cute!! ಅಂದುಕೊಂಡಳು. ಸ್ಕೋಪ್ ತಗೋತಾನೆ handsome ಫೆಲೋ..  ನನಗೇನು ಕಡಿಮೆ,ಹುಡುಗೀರೆ ಬಂದು ಮಾತನಾಡಿಸಲಿ ಅನ್ನೋ ಜಾತಿ ಇರಬೇಕು ಇವನದ್ದು. ಏನೇ ಆಗಲಿ ಬೇರೆ ಹುಡುಗರ ಥರ ಬಂದು ಹಲ್ಲು ಕಿರಿದು ಮಾತನಾಡುವುದಿಲ್ಲ, ಇವನು ಸ್ವಲ್ಪ ಡಿಫರೆಂಟ್. ಪರ್ಸನಾಲಿಟಿ ನಲ್ಲಿ weight ಇದೆ ಮಾತ್ರ .  ನನಗಿಂತ ಒಂದು ಮೂರು-ನಾಲ್ಕು ವರ್ಷ ದೊಡ್ಡವನಿರಬೇಕು. 

ಒಂದು ಸಾರಿ ಡ್ರೈವರ್ ಸಡನ್ ಆಗಿ ಬ್ರೇಕ್ ಹಾಕಿದ. ಇವನ ಮೊಬೈಲ್ ಫೋನ್ ಸೀಟಿಂದ  ಕೆಳಗೆ ಬಿತ್ತು. ಅವಳ ಕಾಲ ಹತ್ತಿರ. ಇವಳು ಬಗ್ಗಿ ಅದನ್ನ ತಗೊಂಡು ಅವನ ಕೈ ತಾಕಿಸಿ, excuse me.. ಯುವರ್ ಫೋನ್ ಅಂದಳು. ಅವನು 'ಒಹ್, thank you ' ಅಂತ ಅದನ್ನ ತೆಗೆದುಕೊಂಡ. 

'Blackberry ನಾ? Its ಸೊ ಬೋರಿಂಗ್!! '  ಅವನ ಫೋನ್ ಮೇಲೆ ಕಾಮೆಂಟ್ ಕೇಳದೆ ಕೊಟ್ಟಳು. 

ಒಮ್ಮೆ ಅವಳ ನೋಡಿ, ಕಿರುನಗೆಯಿಂದ ತಲೆ ಆಡಿಸಿದ. ಹೌದು ಎಂಬಂತೆ. 

'By the way i am Priya ' ಅದೇ ಸಲಿಗೆಯಲ್ಲಿ ಹೇಳಿದಳು. 

'Hey..' ಅಂತ ಅಂದು, ಕಷ್ಟ ಪಟ್ಟು ನಕ್ಕು ಮತ್ತೆ ಸೀಟಿನಲ್ಲಿ settle ಆದ. 

''What the hell??.. ನಾನಾಗೆ introduce ಮಾಡಿಕೊಂಡರೂ ತನ್ನ ಹೆಸರು ಕೂಡ ಹೇಳಲಿಲ್ಲ . ದಿಸ್ ಇಸ್ ಸಿಕ್. ಅಂತ ಮನಸಲ್ಲೇ ಬೈದಳು. 

ಸ್ವಲ್ಪ ಸಿಟ್ಟಿನಿಂದ ಮತ್ತೆ ತನ್ನ ಪಾಡಿಗೆ ತಾನು ಮುಂದೆ ಮುಖ ಮಾಡಿ ಕೂತುಕೊಂಡಳು. ಒಂದು ಮನಸು ಯಾಕಾದರೂ ಇವನನ್ನ ಮಾತನಾದಿಸಿದೇನೋ ಅಂದರೆ, ಇನ್ನ್ನೊಂದು ಮನಸು ಇಲ್ಲ ರೆಸ್ಪಾನ್ಸ್ ಹೇಗೆ ಬರಲಿ.. I should find out what's his problem ಅಂತಿತ್ತು. 

ಇನ್ನೇನು ಅವನ ಮನೆ ಬಂತು, ಇಳಿದುಕೊಂಡ. ಆದರೆ ಏನನ್ನೋ ಮರೆತು ಹೋಗಿದ್ದಾನೆ. ಒಂದು ಬಿಳಿ  ಕವರ್. ಯಾರು ನೋಡಿಲ್ಲ ಅದನ್ನ, ಯಾರಿಗೂ ಹೇಳೋದೂ ಬೇಡ. ಬೆಳಿಗ್ಗೆ ನಾನೇ ಅವನಿಗೆ ಅದನ್ನು ಕೊಡುತ್ತೇನೆ ಅಂತ ತನ್ನ ಬ್ಯಾಗ್ ನಲ್ಲಿ ಇಟ್ಟುಕೊಂಡಳು. 

ಇವಳು ಇರುವುದು P.G ನಲ್ಲಿ. ರಾತ್ರಿ ಊಟ ಮುಗಿಸಿ, ಬೆಡ್ ಮೇಲೆ ಮಲಗೋ ವೇಳೆಗೆ ಆ ಕವರ್ ನೆನಪು  ಆಯ್ತು. ಅದನ್ನ ಓಪನ್ ಮಾಡಿ ನೋಡೋದು ತಪ್ಪೇ, ಆದರೆ ನಾನು ನೋಡಲೇಬೇಕು. ಬೇಕಾದರೆ ಮತ್ತೆ ಅದನ್ನು ಮೊದಲಿನಂತೆ arrange ಮಾಡಿದರಾಯ್ತು ಅಂತ ಪೋಲಿ ನಗುವಿನಿಂದ ತೆರೆದಳು. 

ಮೊದಲನೆಯದು insurance ಬಾಂಡ್.. 


Policy Holder’s name      :      Priya Aaditya
Age                              :      25
Nominee                       :      Aaditya
Policy commencement date:  15th November 2009.
Maturity Date                 :      15th November 2024. 


ಇನ್ನೊಂದು ಪೇಪರ್ ನಲ್ಲಿ ಇವನ Voter-ID ನ ಫೋಟೋ ಕಾಪಿ.. 


ELECTION COMMISSION OF INDIA
Identity Card
TKH1310242

Elector’s Name       :      Aaditya
DOB                     :      09/11/1985
Father’s name        :      Sheshadri
Sex                      :      Male


So, He is Aditya! ಅಂದರೆ ಪ್ರಿಯ ಇವನ ಹೆಂಡತಿ ನಾ? 28 ವರ್ಷ ವಯ್ಯಸ್ಸು ಸಾಹೇಬರಿಗೆ ಮದುವೆನೂ ಆಗಿದೆ ಸಾಲದ್ದಕ್ಕೆ ನನ್ನ ಹೆಸರೇ ಇದೆ ಅವಳಿಗೂ. . ನಾನು ಸುಮ್ಮನೆ ಕನಸು ಕಟ್ಟು ಕೊಂಡಿದ್ದೆನಲ್ಲ ಈ handsome fellow ಗೋಸ್ಕರ. ಛೆ!! ನನ್ನ first crush ಸೆಕೆಂಡ್ ಹ್ಯಾಂಡ್ ಹುಡುಗನ ಮೇಲೆ ಆಗಬೇಕಾ! ಅಂತ ನಕ್ಕಳು. 

ಇನ್ನೊಂದೆರಡು ಪೇಪರ್ ತೆಗೆದು ನೋಡಿದಳು ಕವರ್ ನಿಂದ.. 

Marriage certificate ನ photocopy ಜೊತೆಗೆ ಗಂಡ ಹೆಂಡತಿಯ famili photo.

Oh my goodness!! She is so beautiful. ನನಗಿಂತನೂ ಒಂದೆರಡು ಪಟ್ಟು ಚೆನ್ನಾಗೆ ಇದಾಳೆ . ಮದುವೆ ಡೇಟ್ ಬರೆದಿದೆ ಹಿಂದೆ 5th Sept 2009. ಪೇರ್ ಚೆನ್ನಾಗಿದೆ, They really are made for each other ಅಂದು ಕೊಂಡಳು. 

ಮತ್ತೆರಡು ಪೇಪರ್ ಇದೆ. ಒಂದರಲ್ಲಿ medicall bills ಗಳ attachments. ಸುಮಾರು 2.5  ಲಕ್ಷದ್ದು!!. ಡಾಕ್ಯುಮೆಂಟ್ಸ್ ಗಳ ಮೇಲೆ ಪ್ರಿಯಾಳ  ಹೆಸರು ಇದೆ. 

ಮತ್ತೊಂದು ಪೇಪರ್ ನಲ್ಲಿ ಇರೋದು Policy amount claim ಮಾಡೋ request application!!

ಪಾಲಿಸಿ ಹೋಲ್ಡರ್ ಹೆಸರು ಪ್ರಿಯ, nominee ಆದಿತ್ಯ. ರಿಕ್ವೆಸ್ಟ್ ಫೈಲ್ ಮಾಡಿದ್ದು ಆದಿತ್ಯ ನೆ. ಮ್ಯಾರೇಜ್ ಪ್ರೂಫ್ ಗಾಗಿಯೇ ಈ ಎಲ್ಲ ಡಾಕ್ಯುಮೆಂಟ್ಸ್ ಹಾಗು ಫೋಟೋಸ್. 

ಎರಡು ನಿಮಿಷ ಮನಸು blank ಆಯ್ತು.. 

ಅಂದರೆ??.. ಮದುವೆ ಆಗಿದ್ದು 05th Sept 2009, ಈ ಪಾಲಿಸಿ ನ ಆದಿತ್ಯ ನೆ ಪ್ರಿಯಾಳ  ಹೆಸರಿನಲ್ಲಿ ಮಾಡಿಸಿದ್ದು 15th November 2009 ನಲ್ಲಿ. ಈಗ ಪಾಲಿಸಿ ಗೆ ಮೂರು ವರ್ಷ ಆಗಿದೆ. ಮೆಡಿಕಲ್ ಬಿಲ್ಸ್ ಇರೋ ಡೇಟ್ 12th January 2013. ಈ ರಿಕ್ವೆಸ್ಟ್ ಅಪ್ಲಿಕೇಶನ್ ಪಾಲಿಸಿ ದುಡ್ಡನ್ನ ಕ್ಲೇಮ್ ಮಾಡೋಕೆ ಬರೆದಿದ್ದು. ನೋಮಿನಿ ID proofs ಇವೆ. maturity ಗು ಮುನ್ನ ಹಣ ನಾ claim ಮಾಡ್ತಿದಾನೆ. So??..Does it mean...????

ಒಂದೇ ಏಟಿಗೆ ಆಕಾಶ ಬಿದ್ದಂಗಾಯ್ತು ತಲೆ ಮೇಲೆ. ಆಶ್ಚರ್ಯ, ದುಃಖ ಒಮ್ಮೆ ಆಗಿತ್ತು. ವಿಷಯ ನಾ ಡೈಜೆಸ್ಟ್ ಮಾಡಿಕೊಳ್ಳೋಕೆ ಕಷ್ಟ ಆಯ್ತು. ಆವತ್ತು ರಾತ್ರಿ ನಿದ್ದೆ ಇಲ್ಲದೆ ಚಡಪಡಿಸಿದ್ದಳು ಪ್ರಿಯ.. 

ಮರುದಿನ ಬೆಳಿಗ್ಗೆ ಬೇಗ ಬಂದು ಅವನ ಸೀಟಿನಲ್ಲಿ ಆ ಕವರ್ ಇಟ್ಟಿದ್ದಳು. ಪಕ್ಕ ಕೂತ ಸ್ವಾತಿ 'ಏನೇ ಪ್ರಿಯ??.. ನಿನ್ನೆ ಅವನನ್ನ ಏನೋ ಮಾತಾಡಿಸಿ ಬಿಡ್ತೀನಿ, friendship ಮಾಡ್ತೀನಿ ಅಂತೆಲ್ಲ ಹೇಳ್ತಿದ್ದೆ. ಏನ್ ಮೇಡಂ? full flat ನಾ ಪಾರ್ಟಿ ಮೇಲೆ?? ನಾವು line ನಲ್ಲೆ ಇದೀವಮ್ಮ ಆ ಅಗ್ನೀಪಥ್ ಅಮಿತಾಭ್ ಬಚ್ಚನ್ ಗೋಸ್ಕರ.. ' ಅಂತ ನಕ್ಕಿದ್ದಳು. 

ಮುಂದೆ ಕೂತ ಗಿರಿ- 'ಬಂದ ನೋಡು ರೋಬೋಟ್, ಈಗ ಹೋಗಿ settle ಆಗ್ತಾನೆ ತನ್ನ ಸಿಂಹಾಸನದ ಮೇಲೆ ' ಅಂತ ಲೇವಡಿ ಮಾಡಿದ್ದ. 

ಹಿಂದೆ ತಿರುಗಿ ನೋಡಿದಳು ಪ್ರಿಯ.. 

ಆದಿತ್ಯ ಮತ್ತದೇ ಸೀಟಿನಲ್ಲಿ ಆ ಮರೆತು ಹೋದ ಕವರ್ ನ ಬ್ಯಾಗ್ ನಲ್ಲಿ ಇಟ್ಟುಕೊಳುತ್ತ ಕೂತಿದ್ದ. ಬ್ಯಾಗ್ ಸೈಡ್ ಸರಿಸಿ ಕಣ್ಣು ಮುಚ್ಚಿದ್ದ. 

ನಿದ್ದೆ. ಕನಸು. ಕನಸಲ್ಲಿ ಅವಳು.. . 

ಪ್ರಿಯಾಳ ಕಣ್ಣಿನ ಮೋಡ ನೀರೋಡೆದಿತ್ತು. 

1 comment:

  1. 2 taas ant helidav
    Ondu vari taasige mani bantallo :P
    Anyhow mast ait le dosta.
    Techie aadru kannada literature daag interest nodi khushi aagtaiti. Keep it up.

    ReplyDelete

ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...

ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು,...