ಸೂಕ್ಷ್ಮ
ತನ್ನ ಹೊಟ್ಟೆಯನ್ನೇ ಗಾದೆಯಾಗಿಸಿದ್ದ ಮಗಳಿಗೆ
ಇಂದು ಹದಿನಾರು. ಅದ್ಹೇಗೆ ಹೇಳಿಯಾನು ಬಿಡಲು ಆ ಸಲಿಗೆ
ಅಮ್ಮನ ಮಾತೊಂಚೂರು, ಅಪ್ಪನ ಮಾತೊಂಚೂರು
ಹತ್ತಿರವ ದೂರವಾಗಿಸಲು ಅದೇನು ಹೇಳಿದರೋ ಸೂಕ್ಷ್ಮಕೆ.
ಬಿಡೆ
ಸಿಟ್ಟಾದನೇ, ಮಗ
ತಪ್ಪಾಗಿ ತಿಳಿದನೇ ತನ್ನ...
ಕಟ್ಟಾದ ಫೋನಿನಲ್ಲಿ ಅದೇನೋ ಹೇಳಲು ತಡವರಿಸಿ
ಅವನ ಸಮಯಕ್ಕೆ ಭಾರವಾದಂತೆ ಮನದಲ್ಲಿ ತಳಮಳಿಸಿ
ವೀರು...
ಹಾಂ ಹೇಳು..
ಈ ವಾರ ನಿನ್ನಲ್ಲಿ ಇದ್ದರೆ ಸ್ವಲ್ಪ ಹಣ...
ನಾಳೆ ಅವನು ಮರಳಿ ಫೋನಿಸದಿದ್ದರೆ ?
ತಿಂಗಳ ಕೊನೆಗೆ ತನ್ನ ಮರೆತರೆ ?
ಬರಲಿರುವ ಜಾತ್ರೆಗೆ ಬರದೆ ಹೋದರೆ?
ಅತ್ತು ನೀರಾಗಿ ಹರಿಯುವ ಮುನ್ನ ಮತ್ತೆ ರಿಂಗಣಿಸಿತಾ ಫೋನು...
ಅಮ್ಮ ??
ಹೇಳು ವೀರು !
ಅಳ್ತಾ ಇದ್ದೀಯ?
ಇಲ್ಲಪ್ಪ... ಸುಮ್ನೆ ಕಣ್ಣಲ್ಲಿ ನೀರು...
ಹೊಟ್ಟೆ- ಹೃದಯ
ಯಾರೋ ಹೇಳಿದರು ಕೆಲಸದಲ್ಲಿ ಪ್ರೇಮವ ಹುಡುಕು
ಸ್ವಾಮೀ... ಹೃದಯಕೂ ಹೊಟ್ಟೆಗೂ ಎತ್ತಣ ಸಂಬಂಧ
ಬರೀ ಎರಡು ಅಂಗಾಂಗಗಳ್ಳಲದೆ
ಸರೀ ಎರಡು ಫಿಲಾಸಫಿಗಳವು
No comments:
Post a Comment