ಬರವಣಿಗೆ
ಕಂಗಳೆಂಬ ಧಣಿಯ ಅರಸಿ
ನೋಟವೆಂಬ ಕೂಲಿಯ ಪಡೆಯಲು
ಹೊರಟು ನಿಂತಿರುವ ಪದಗಳೆಂಬ ಆಳಿನ ದಂಡು
ಓದು
ಕಣ್ಣಿನ ಭಿಕ್ಷೆ
ಬರೆದವನು
ಹೆದರಿ ಕೂತ ಕಳಕಳಿ
ಓದುವವನು
ಪದಗಳಿಗೆ ಮುಕ್ತಿ ಕೊಡುವಾತ... ಯಮಧರ್ಮ.
ಕಾಗದ
ಲೆಕ್ಕವಿರಿಸೋ ಚಿತ್ರಗುಪ್ತ
ಲೇಖನಿ
ಆಸೆ, ಕಾಮ, ಲೋಭ, ಕ್ರೋಧ, ಮಾತ್ಸರ್ಯ ಇತ್ತ್ಯಾದಿ.
ನೆಮ್ಮದಿ
ಬರೆಯಲಾಗದ ಕಥೆ. ಬರೆಯಬೇಕಿರುವ ಕಥೆ
ನಾನು
ಕಾಶ್ಮೀರಕ್ಕೆ ಗಾಳ ಹಾಕಿ ಕಪ್ಪೆ ಹಿಡಿದ ಬೆಸ್ತ
ನೀವು
ಇದೆಲ್ಲಕಿಂತ ಬೇರೆ ಏನೋ ಇದೆ... ಇವನಿಗದು ಗೊತ್ತಿಲ್ಲ. ಇನ್ನೂ ಪಳಗಬೇಕು, ಎಂದು ಲೆಕ್ಕ ಹಾಕುತ್ತಿರುವ ಸಿದ್ಧಾಂತಿ; ಇರಬಹುದು.
No comments:
Post a Comment